logo

ಕೆಯುಡಬ್ಲೂಜೆ (KUWJ) ಎಂದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (Karnataka Union of Working Journalists) ಎಂದು ಅರ್ಥ, ಇದು ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಸ್ಥಾಪಿಸಲಾದ ಒಂದು ಸಂಘಟನೆ. ಈ ಸಂಘವು ಬೆಂಗಳೂರಿನ ಕಂದಾಯ ಭವನದಲ್ಲಿ ಕಚೇರಿಯನ್ನು ಹೊಂದಿದೆ ಮತ್ತು ಪತ್ರಕರ್ತರಿಗೆ ಗ್ರಂಥಾಲಯದಂತಹ ಸೌಲಭ್ಯಗಳನ್ನು ಒದಗಿಸುತ್ತದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ) ಸಮಸ್ತ ಪತ್ರಕರ್ತರ ಸಾಂಘಿಕ ಶಕ್ತಿಯ ವೇದಿಕೆ ಆಗಿದೆ. ಪತ್ರಕರ್ತರ ವೃತ್ತಿ ಹಿತಾಸಕ್ತಿಗಳನ್ನು ಕಾಪಾಡುವ ಸದುದ್ದೇಶದಿಂದ ಮಂಕುತಿಮ್ಮನ ಕಗ್ಗದ ಖ್ಯಾತಿಯ ಸಾಹಿತಿ ಹಾಗೂ ಪತ್ರಕರ್ತರಾದ ಶ್ರೀ ಡಿ.ವಿ ಗುಂಡಪ್ಪ(ಡಿ.ವಿ.ಜಿ.) ಅವರು 1932 ರಲ್ಲಿ ಸಂಸ್ಥಾಪಿಸಿದ ಮೈಸೂರು ಪತ್ರಕರ್ತರ ಸಂಘವು ಕರ್ನಾಟಕದ ಏಕೀಕರಣ ಬಳಿಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಪರಿವರ್ತನೆಗೊಂಡು ತೊಂಬತೊಂದು ವಸಂತಗಳನ್ನು ಪೂರೈಸಿದ ಸಂಭ್ರಮದಲ್ಲಿರುವುದು ಹೆಮ್ಮೆಯ ಸಂಗತಿ.

ಕಳೆದ 9 ದಶಕಗಳಿಂದ ವೃತ್ತಿನಿರತ ಪತ್ರಕರ್ತರ ಪರವಾಗಿ ಹೋರಾಟ ಮಾಡುತ್ತಾ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದೆ. ಪ್ರತಿ ವರ್ಷ ಸುದ್ದಿಮನೆಯಲ್ಲಿರುವ ಹಿರಿಯ ಮತ್ತು ಕಿರಿಯ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನಿಸುವ, ವೃತ್ತಿಪರ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಚರ್ಚೆ, ವಿಚಾರ ಸಂಕಿರಣ ಮತ್ತು ಅಧ್ಯಯನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುತ್ತ ಬಂದಿದೆ.

ಪತ್ರಕರ್ತರ ಹಕ್ಕುಗಳ ರಕ್ಷಣೆ

ಪತ್ರಕರ್ತರ ಹಕ್ಕುಗಳ ರಕ್ಷಣೆ

ತರಬೇತಿ ಮತ್ತು ಅಭಿವೃದ್ಧಿ

ಕಾರ್ಯಾಗಾರಗಳು, ಸೆಮಿನಾರ್‌ಗಳು ಮತ್ತು ವೃತ್ತಿಪರ ತರಬೇತಿಗಳು.

ಕಾನೂನು ಮತ್ತು ವೃತ್ತಿಪರ ಬೆಂಬಲ

ಕಾನೂನು ಸಲಹೆ, ಮಾರ್ಗದರ್ಶನ ಮತ್ತು ಸಮಸ್ಯೆಗಳ ಪರಿಹಾರ.

ಪ್ರತಿನಿಧಿತ್ವ ಮತ್ತು ವಕಾಲತ್ತು

ಸರ್ಕಾರ ಮತ್ತು ಸಂಸ್ಥೆಗಳ ಮುಂದೆ ಪತ್ರಕರ್ತರ ಧ್ವನಿ.

ಶ್ರೀ ಡಿ.ವಿ ಗುಂಡಪ್ಪ(ಡಿ.ವಿ.ಜಿ.)

ಡಿ.ವಿ. ಗುಂಡಪ್ಪ (ಡಿ.ವಿ.ಜಿ.) ಅವರು ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಪ್ರಮುಖ ಶಕ್ತಿಗಳಲ್ಲಿ ಒಬ್ಬರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಇತಿಹಾಸದಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು.
ಸ್ಥಾಪಕ ಅಧ್ಯಕ್ಷರು: ಡಿ.ವಿ. ಗುಂಡಪ್ಪನವರು 1932ರಲ್ಲಿ ಸ್ಥಾಪನೆಯಾದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪತ್ರಕರ್ತರ ಹಿತರಕ್ಷಣೆ ಮತ್ತು ವೃತ್ತಿಪರ ಗೌರವವನ್ನು ಎತ್ತಿಹಿಡಿಯಲು ಈ ಸಂಘಟನೆಯ ಮೂಲಕ ಶ್ರಮಿಸಿದರು.

ಪತ್ರಿಕೋದ್ಯಮದ ಜೀವನ: ಡಿ.ವಿ.ಜಿ. ಅವರು ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು 1906-07ರ ಸುಮಾರಿಗೆ ಆರಂಭಿಸಿದರು. ಅವರು ‘ಭಾರತ’ (Kannada) ಮತ್ತು ‘ದಿ ಕರ್ನಾಟಕ’ (English) ಎಂಬ ಪತ್ರಿಕೆಗಳನ್ನು ಆರಂಭಿಸಿ, ಸಮಾಜ ಸುಧಾರಣೆ ಮತ್ತು ರಾಜಕೀಯ ಜಾಗೃತಿಯಲ್ಲಿ ತೊಡಗಿದ್ದರು.

ಮೌಲ್ಯಾಧಾರಿತ ಪತ್ರಿಕೋದ್ಯಮ: ಅವರು ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಸತ್ಯನಿಷ್ಠೆಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಲೇಖನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದವು.

ಪತ್ರಿಕಾ ದಿನಾಚರಣೆ: ಇಂದಿಗೂ ಕರ್ನಾಟಕದಲ್ಲಿ ಪತ್ರಿಕೋದ್ಯಮದ ಸಾಧಕರನ್ನು ಗೌರವಿಸುವಾಗ ಮತ್ತು ಪತ್ರಿಕಾ ದಿನಾಚರಣೆಗಳ ಸಂದರ್ಭದಲ್ಲಿ ಡಿ.ವಿ.ಜಿ. ಅವರ ಹೆಸರು ಮುಂಚೂಣಿಯಲ್ಲಿರುತ್ತದೆ.

ಶಿವಾನಂದ ತಗಡೂರು ಅವರು ಕೆಯುಡಬ್ಲೂಜೆ ಅಧ್ಯಕ್ಷರಾಗಿ 2025-2028ನೇ ಸಾಲಿಗೆ ಪುನರಾಯ್ಕೆಗೊಂಡಿದ್ದಾರೆ, ಏಕೆಂದರೆ ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಬಂದಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸಂಘದ ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಕ್ಷೇಮಕ್ಕೆ ಶ್ರಮಿಸಿದ್ದಾರೆ.

ಅಧ್ಯಕ್ಷರಾದ ಶಿವಾನಂದ ತಗಡೂರು ಅವರ ಕುರಿತು:

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಕುಗ್ರಾಮ ತಗಡೂರು ಗ್ರಾಮದ ರೈತ ಕುಟುಂಬದ ಶ್ರೀಮತಿ ಕಮಲಮ್ಮ ಮತ್ತು ವೀರೇಗೌಡ ದಂಪತಿಗಳ ಪುತ್ರನಾಗಿ ಜನಿಸಿದ ಟಿ.ವಿ.ಶಿವಾನಂದ (ಆನಂದ) ಅವರು ತೊಂಬತ್ತರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿದವರು.

2025-28ನೇ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅವರ ಒಂದೇ ನಾಮಪತ್ರ ಬಂದಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತೊಂಬತ್ತರ ದಶಕದಲ್ಲಿ ಪತ್ರಿಕೋದ್ಯಮ ಪ್ರವೇಶಿಸಿ, ರಾಜ್ಯ ಪತ್ರಕರ್ತರ ಸಮ್ಮೇಳನಗಳಿಗೆ ಹೊಸ ರೂಪ ನೀಡಿದ್ದರು. ಇವರ ಆಡಳಿತವಧಿಯಲ್ಲಿ ಪತ್ರಕರ್ತರ ಕ್ಷೇಮ ನಿಧಿಯನ್ನು ಒಂದು ಕೋಟಿ ರೂ.ಗೆ ಹೆಚ್ಚಿಸಲು ಶ್ರಮಿಸಿದ್ದಾರೆ. ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯ ಪತ್ರಕರ್ತರ ಸಮ್ಮೇಳನಗಳಿಗೆ ಹೊಸ ರೂಪ ನೀಡಿದ್ದಲ್ಲದೆ, ಪತ್ರಕರ್ತರ ಕ್ಷೇಮ ನಿಧಿಯನ್ನು ಒಂದು ಕೋಟಿಗೆ ಹೆಚ್ಚಿಸುವಲ್ಲಿ ಶ್ರಮಿಸಿದ್ದ ಇವರು ಹತ್ತು ಹಲವು ಕಾರ್ಯಕ್ರಮದ ಮೂಲಕ ಕೆಯುಡಬ್ಲೂೃಜೆಗೆ ಹೊಸ ಆಯಾಮ ನೀಡಿದ್ದಾರೆ. ಸತತ ಎರಡು ಬಾರಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ಅವರ ಸಾಧನೆ ಮತ್ತು ಸೇವೆಗೆ ಸಂದ ಗೌರವ. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸೇರಿದಂತೆ ಒಟ್ಟು ಒಂಬತ್ತು ಸ್ಥಾನಗಳಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಸಿ.ಲೋಕೇಶ್ ಮತ್ತು ಖಜಾಂಚಿ ಸ್ಥಾನಕ್ಕೆ ವಾಸುದೇವ ಹೊಳ್ಳ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Scroll to Top