ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಪತ್ರಕರ್ತರ ಒಳಿತಿಗೆ, ಪತ್ರಿಕೋದ್ಯಮದ ವೃತ್ತಿಪರತೆ ಉಳಿವಿನ ಆಶಯದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಆರಂಭಗೊಂಡು, ಡಿ ವಿ ಗುಂಡಪ್ಪ ( ಡಿವಿಜಿ) ಅವರಿಂದ ಮರುಚಾಲನೆಗೊಂಡ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ( Karnataka UNION of workings journalists) ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಈ ನಡುವೆ ಇದೊಂದು “ಕಾರ್ಯ ಮರೆತ ಪತ್ರಕರ್ತರ ಸಂಘ” ಎಂದೇ ಟೀಕೆಗೆ ಗುರಿಯಾಗಿತ್ತು. ಕಳೆದ 9 ವರ್ಷಗಳಲ್ಲಿ ಇಂತಹ ಟೀಕೆ ಟಿಪ್ಪಣಿಗಳಿಂದ ಸಂಘ ಬಿಡುಗಡೆಗೊಂಡು ನೈಜ “ಕಾರ್ಯನಿರತ ಪತ್ರಕರ್ತರ ಸಂಘ”ವಾಗಿ ಜೀವಗೊಂಡಿದೆ.
ಈ ಮರುಹುಟ್ಟಿಗೆ ಶಿವಾನಂದ ತಗಡೂರು ಅವರ ಮುಂದಾಳತ್ವ ಕಾರಣ ಅನ್ನೋದರಲ್ಲಿ ಎರಡು ಮಾತಿಲ್ಲ. ಇವರೊಂದಿಗೆ ಪದಾಧಿಕಾರಿಗಳಾಗಿ ಜೊತೆಯಾದವರೆಲ್ಲರೂ ಅವರದ್ದೇ ಮಿತಿಯಲ್ಲಿ ಕೈಜೋಡಿಸಿ ಸಾಂಘಿಕವಾಗಿ ದುಡಿಯುತ್ತಿದ್ದಾರೆ.
KUWJ ಈಗ ಪತ್ರಕರ್ತರ ನೆರವಿಗೆ ದೊಡ್ಡ ಭರವಸೆಯೇ ಆಗಿದೆ ಎಂದರೆ ಅತಿಶಯೋಕ್ತಿಯಲ್ಲ.

2025 _2028 ನೆ ಸಾಲಿನ ಅವಧಿಗೂ ಶಿವಾನಂದ ತಗಡೂರು ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.
ಎಲ್ಲಾ ಜಿಲ್ಲೆಗಳಲ್ಲೂ ಕ್ರಿಯಾಶೀಲ ತಂಡಗಳು ಚುನಾವಣೆ ಎಂಬ ಹಬ್ಬದಲ್ಲಿ ಮಿಂದು ಬಂದಿವೆ. ಕಾರ್ಯನಿರತ ಪತ್ರಕರ್ತರ ವ್ಯಕ್ತಿಗತ ನೆರವಿಗೆ, ವೃತ್ತಿಪರತೆಯನ್ನು ಇನ್ನಷ್ಟು ಗುಣಾತ್ಮಕಗೊಳಿಸುವ ಪ್ರಯತ್ನಗಳಿಗೆ ಬಲ ಬಂದಂತಾಗಿದೆ.


ಕಳೆದ ಒಂದು ತಿಂಗಳ KUWJ
ರಾಜ್ಯ ಚುನಾವಣಾಧಿಕಾರಿಯಾಗಿ ನನ್ನ ಪಾಲಿನ ಕೆಲಸವನ್ನು ನಿಷ್ಠೆ ಮತ್ತು ನ್ಯಾಯದಿಂದ ಮುಗಿಸಿದ ತೃಪ್ತಿ ನನ್ನದು.
ಸಂಘದ ರಾಜ್ಯ ಪದಾಧಿಕಾರಿಗಳಿಗೆ ಆಯ್ಕೆಯ ಪ್ರಮಾಣ ಪತ್ರಗಳ ಕೊಡುವ ಜೊತೆಗೆ ಮಹಾಮಾನವತಾವಾದಿ, ಈ ದೇಶ ಕಂಡ ಸರ್ವಶ್ರೇಷ್ಠ ಪತ್ರಕರ್ತ Dr ಬಾಬಾ ಸಾಹೇಬ್ ಅಂಬೇಡ್ಕರ್ ಅವರ ” ಬುದ್ಧ ಮತ್ತು ಧಮ್ಮ” ಕೃತಿಯನ್ನು ಅವರುಗಳ ಕೈಗಿಟ್ಟು ಶುಭಕೋರಿದೆ

Scroll to Top